ಶ್ರೀ ಗುರುವೇ ನಮಃ
ಗುರುವಿನ
ಬಗ್ಗೆ ಹೇಳಲು ಒಂದು ಜನ್ಮ
ಸಾಲದು, ಒಂದು ಗ್ರಂಥ ಸಾಲದು.
ಗುರು ಇಲ್ಲದೆ ಜೀವನದ ದಡಮುಟ್ಟುವದು
ತುಂಬಾ ಕಠಿಣವಾಗಿರುತ್ತೆ. ಗುರು ಇಲ್ಲದೆ ಬಿಲ್
ವಿದ್ಯೆ ಕಲಿತವರುಂಟು ಜಗತ್ತಿನಲ್ಲಿ ಆದರೆ ಗುರು ಇಲ್ಲದೆ
ಮುಕ್ತಿ ಮಾರ್ಗವ ಅರಿತವರ ಇಲ್ಲ.
ಈ ಸುಂದರಯ ಮಾಯವಾದ
ಭಗವಂತ ಅದಭುತ ಸ್ರಷ್ಟಿ ಒಳಗೆ
ಒಂದ್ ಆಗಿರುವ ಈ ಭೂಮಿಗೆ,
ಭಗವಂತನ ಕರುಣೆಇಂದ ಭೂಮಿಗೆ ಕರೆತರುವ ತಂದೆ
ತಾಯೀ ಜೀವನದ ಮೊದಲ ಗುರು
ಆದರೆ, ಜೀವನದ ಮುಕ್ತಿ ಕೊಡಿಸಲು
ಒಬ್ಬ ಮಹಾನ್ ಗುರುವಿನ ಅವಶಕತೆ
ಇದ್ದೆ ಇರುತ್ತೆ.
ನಾನು ಓದಿದ ಕೇಳಿದ ಎಲ್ಲ
ಮಹಾನ್ ಗುರುಗಳಿಗೂ ಒಬ್ಬ ಗುರುಗಳು ಇದ್ದೆ
ಇದ್ದರು . ಕೃಷ್ಣಮ್ ಒಂದೇ ಜಗದ್
ಗುರುವಂ ಅನೋದ್ ಮಾತು ಆದ್ರೆ
ಆ ಕೃಷ್ಣನನಿಗೂ ಸಾಂದೀಪ್
ಗುರುಗಳ ಮಾರ್ಗ ದರ್ಶನ ಜೀವನಕ್ಕೆ
ಬೇಕ್ ಆಯಿತು. ಮರ್ಯಾದಾ ಪುರುಶೋಥಮ್ಮ
ರಾಮದೇವರಿಗೂ ವಿಶ್ವಾಮಿತ್ರರು ಗುರುಗಳಾಗಿದ್ದರು , ಹೆಂತಹ ಜ್ಞಾನಿ ಆದರು
ಗುರುವಿನ ಅವಶಕತೆ ಇದ್ದೆ ಇದೆ
ಅನ್ನುವದೆ ಕೃಷ್ಣನ್ ರಾಮರ ಜೀವನದ
ಸಂದೇಶ.
ಹಿಂತಾ ಅತ್ಯಾದುಭುತವಾದ ಸ್ಥಾನ ಮಾನ ಹೊಂದಿರುವ
ಗುರು ಸ್ಥಾನ ಕಲಿಯುಗದಲ್ಲಿ ಕೆಲ
ದುರಾತ್ಮಾರ್ ದುರುದೇಶ್ಶದ ಮತ್ತು ಸ್ವಾರ್ಥ ಪೂರಿತವಾಗಿ
ಗುರು ಅನ್ನೋ ಮಹಾ ಪೀಠಕ್ಕೆ
ಅನುಮಾನ ಮತ್ತು ಅಪನಂಬಿಕೆ ಅನ್ನೋ
ಕಳಕಂಗಳು ದೀನೇ ದೀನೇ ಹೆಚ್ಚುಯುತಲೇ
ಇದೆ, ಆದರೆ ಒಬ್ಬ ಶಿಷ್ಯನಿಗೆ
ಹೇಗೆ ಒಬ್ಬ ಒಳ್ಳೆ ಗುರುವಿನ
ಸಾಂಗತ್ಯ ಬೇಕೋ ಹಾಗೆ ಒಬ್ಬ
ಮಹಾನ್ ಗುರುವಿಗೆ ಒಬ್ಬ ಒಳ್ಳೆ ಶಿಷ್ಯಬೇಕೇ
ಬೇಕು. ಇಲ್ಲಿ ಒಂದೇ ನಾಣ್ಯದ
ಎರಡು ಮುಖದಂತೆ, ಗುರು ಮತ್ತು ಶಿಸ್ಯ
ಒಬ್ಬನೇ. ಹುಡುಕುವ ಶಿಶ್ಯನಲ್ಲಿ ಸಮಾಧಾನ
ಮತ್ತು ತಾಳ್ಮೆ ಬೇಕೇ ಬೇಕು.
ಆವಾಗಲೇ ಗುರು ದರ್ಶನ ಆಗೋದು.
ಗುರು ಸಿದ್ಧಾರೂಢರು ಗುರುಗಳಿಗಾಗಿ ಹನ್ನೆರಡು ವರ್ಷ ಹುಡುಕಿದರು, ಗುರು
ಶೋಧನೆಗಾಗೆ ತಪ್ಪಸ್ಸು ಮಾಡಿದ್ರು. ಅದಕ್ಕೆ ಹೇಳಿರೋದು, ಗುರುವಿನ
ಗುಲಾಮನಾಗುವ ತನಕ ದೊರಯದನ್ನ ಮುಕ್ತಿ
ಅಂತ.
ಸಂತ ಶಿಶುನಾಳ್ ಶರೀಫರಿಗೆ ಗೋವಿಂದ ಭಟ್ಟರಂತ ಗುರು
ದೊರಕದೆ ಹೋಗಿದ್ರೆ ಏನ್ ಆಗತಾ ಇತ್ತು?
ಒಬ್ಬ ಮಹಾ ಸಂತ ಭಾರತಕ್ಕೆ
ಸಿಗದೇ ಹೋಗತಿದ್ದ. ಗೋವಿಂದ ಭಟ್ಟರು ಬ್ರಾಹ್ಮಣರು,
ಶರೀಫರು ಮುಸಲ್ಮಾನರು ಆದರೆ ಗುರು ಶಿಶ್ಯರಲ್ಲಿ
ಜಾತಿ ಅನ್ನೋದ್ ಯಾವ ಸಮಸ್ಸೆನು
ಮಾಡಲಿಲ್ಲ. ಜ್ಞಾನಕ್ಕೆ ಸಾಧನೆ ಮಾಡುವ ಮತ್ತು
ಆ ಸಾಧನೆ ಎಂದ
ಲೋಕಕ್ಕೆ ಒಳಿತು ಮಾಡುವ ಉದ್ದೇಶ
ಬೇಕೇ ಹೊರತು ಬೇರೆ ಏನು ಅಲ್ಲ.
ಈ ಉದಾಹರಣೆ ಒಬ್ಬ
ಉತ್ತಮ ಗುರು ಉತ್ತಮ ಶಿಸ್ಯನನ್ನಾ
ಹುಡುಕಾಟನೆ ಮತ್ತು ಒಬ್ಬ ಶಿಸ್ಯ
ಉತ್ತಮ ಗುರು ಹುಡಕತಾನೇ ಹೊರತು
ಯಾವ ಜಾತಿ ಸಂಕೋಲೆ ಗಳನಲ್ಲ.
ಜ್ಞಾನ ಸಂಪಾದನೆ ಮಾಡಿ ಈ
ಜನನ ಮರಣದಿಂದ ಮುಕ್ತಿ ಹೊಂದುವದೇ
ಉದ್ದೇಶ ವಾಗಿರುತ್ತೆ.
ಮೇಲೆ ಹೇಳಿದಂತೆ ಯಾವ ಧರಮಕ್ಕೂ ಬಂದಿ
ಆಗದ ಒಂದೇ ಒಂದು ಧರ್ಮ
ಅಂದ್ರೆ ಗುರು ಧರ್ಮ. ಎಲ್ಲರ
ಕಷ್ಟ ಕೇಳುವ ಸಹನೆ, ಅದಕ್ಕೆ
ಅವರ ಅವರ ನಂಬಿಕೆ ಮೇರೆಗೆ
ಅವರ ಅವರ ಯೋಗ್ಯತೆಗೆ ತಕ್ಕ
ಪ್ರತಿಫಲಗಳನ್ನು ಕೊಡತ, ಒಮ್ಮೆ ಸ್ಮರಿಸಿದರು
ಸಾಕು ಜನ್ಮ ಜನ್ಮಾಂತರಗಕ್ಳಲ್ಲೂ ರಕ್ಷಣೆ ಕೊಡುವ ಗುರುಗಳ
ಬಗ್ಗೆ ಮಾತನಾಡಲು ನನ್ನ ಮನ ಹಾತೊರಿಯುತಿತ್ತು.
ಗುರುರಾಜರ ಕ್ರಪೆಇಂದ ನಾನು ಬರಿಯುತಿದ್ದೇನೆ, ಇಲ್ಲಿ
ನಾನು ಲೇಖನಿ ಮಾತ್ರ, ಇಲ್ಲಿ
ಬರುವ ಎಲ್ಲ ಶುದ್ಧ ಭಾವನೆ
ಗುರುಗಳದ್ದು, ಏನಾದ್ರು ತಪ ಇದ್ದರೆ
ಅದು ಅಲ್ಪ ಮತಿಆದ ನನ್ನದು.
ಸರ್ವ ಜನರಿಂದಲೂ ರಾಯರೆಂದೇ ಪ್ರಸಿದ್ಧರಾಗಿರುವ ಗುರುಗಳ ಬಗ್ಗೆ ಹೇಳೋದೇ
ಒಂದೇ ಖುಷಿ, ನಾನು ಓದಿರುವ
ಕೀಳಿರಿವ ಎಲ್ಲ ಗುರುಗಳಲ್ಲಿ ತುಂಬಾ
ಸಹನೆಯ ಮತ್ತು ಸರ್ವ ಜನರನ್ನು
ಸಮಾನವಾಗಿ ನೋಡಿ ಎಲ್ಲರನ್ನು ಉದ್ಧಾರಮಾಡಿದ
ಗುರುಗಳು ಅಂದ್ರೆ ರಾಘವೇಂದ್ರ ಪ್ರಭುಗಳು
ಮತ್ತು ಸಿದ್ಧಾರೂಢ ಗುರುಗಳು. ರಾಯರ ಗುಣಗಾನ ಮಾಡುವಷ್ಟು
ಮತ್ತು ಅವರ ಬಗ್ಗೆ ಮಾತನಾಡುವಷ್ಟು
ಜ್ನ್ಯಾನ ನನಗಿಲ್ಲ, ಆದ್ರೂ ಗುರು ಕೃಪಾಕಟಾಕ್ಷದಿಂದ
ಇದು ಒಂದು ನನ್ನ ಸಣ್ಣ
ಪ್ರಯತ್ನ.
ಗುರುಗಳ
ಜೀವನದ ಕತೆ ಅಲ್ಲಿ ಬರೊ
ವೆಂಕಣ್ಣ ಕತೆ ನನಗೆ ತುಂಬಾ
ಇಷ್ಟವಾದ ಕತೆ, ಯಾಕೆ ಅಂದ್ರೆ
ವೆಂಕಣ್ಣ ಬಾಯಿಬಿಟ್ಟು ಏನು ಕೇಳಿಲ್ಲ, ಕೇಳಿದ್ದು
ಅಂದ್ರೆ ಅದು ಒಂದೇ, ಸ್ವಾಮಿ ನನ್ನ
ದನ ನೋಡಿದ್ರ ಅನ್ನೋದ್, ಆ
ವೆಂಕಣ್ಣನಿಗೆ ನಾನು ಯಾರ್ ಬಳಿ
ಏನ್ ಕೇಳತಾ ಇದೀನಿ ಅನ್ನೋದೇ
ತಿಳದಿರಲಿಲ್ಲ. ದೃಷ್ಟಿ ಮಾತ್ರದಿ ಸರ್ವ
ಪಾಪಗಳನ್ನು ಸುಟ್ಟು ಒಂದೇ ಕ್ಷಣದಲ್ಲಿ
ಮುಕ್ತಿ ಪ್ರಸಾದಿಸೋ ಗುರುಗಳಲ್ಲಿ ಕಳೆದು ಹೋದ ದನದ
ಬಗ್ಗೆ ಕೇಳಿದ ಮುಗ್ದ ವೆಂಕಣ್ಣ
ಮಹಾ ತಪಸ್ವಿಗಳಿಗೂ ಸಿಗದ ರಾಯರ ಮಹಾ
ಆಶೀರ್ವಾದ ಪಡಕೊಂಡಿದ್ದ. ಕಳೆದು ಹೋದ ದನವಲ್ಲದೆ
ಕೇಳದೆ ಎಲ್ಲವನ್ನು ಕೊಡುವ ರಾಯರು ಕೇಳ್ದೆ
ವೆಂಕಣ್ನನಿಗೆ ಮಂತ್ರಾಕ್ಷತೆ ಕೊಟ್ಟು ನಿನಗೆ ಮಂಗಳವಾಗಲಿ
ಅನ್ನುವ ಆಶೀರ್ವಚನ ಕೊಟ್ಟು ಹೋದ ಗುರುಗಳು
ಸಂಚಾರ ಮುಗಿಸಿ ಬರೋದರಲ್ಲಿ ಪೆದ್ದ
ವೆಂಕಣ್ಣ ರಾಜರಿಗೆ ದಿವಾನನಾಗಿ ಹೋಗಿದ್ದ.
ಏನನ್ನು ಕೇಳ್ದೆ ವೆಂಕಣ್ಣನಿಗೆ ಮಹಾ
ಪದವಿಯನ್ನೇ ಇತ್ತ ರಾಯರು. ಜಾತಿ
ಧರ್ಮ ಅನ್ನದೆ ನವಾಬ ಅರ್ಪಿಸಿದ
ಮಾಂಸವನ್ನ ಪ್ರಶ್ನಿಸಿದ ರಾಯರಿಗೆ ನವಾಬ ನಿಮ್ಮ
ಮೂಲ ರಾಮನಿಗೆ ನಮ್ಮ ಕಡೆ
ಇಂದ ಹಣ್ಣು ಹೂವುಎಂದು ಉತ್ತರ ನೀಡಿದ ನವಭನಿಗೆ ನಿಮ್ಮ
ಭಾವನೆ ಅಂತೇ ಮೂಲ ರಾಮನಿಗೆ ನಿಮ್ಮ
ಹಣ್ಣು ಹೂವು ಅರ್ಪಣವಾಗಲಿ ಎಂದಾಗ ಗುರು ಕ್ರಪೆ
ಇಂದ ನಾವಾಭ ಕೊಟ್ಟ ಪರೀಕ್ಷೆಯ ಮಾಂಸವೇ
ಹೂವು ಹಣ್ಣಾಗಿ ರಾಯರು ಭಗವದ್
ಅರ್ಪಣೆ ಮಾಡಿದರು.
ಯಾವ ಭಾವನೆ ಇಂದ ಏನ್ ಕೊಡುತ್ತೇವೋ
ಅದೇ ಭಗವಂತನಿಗೆ ಅರ್ಪಣೆ ಆಗುತ್ತೆ ಅನ್ನೋದೇ ರಾಯರ
ಪಾಠ. ಹಿಂತಾ ಹತ್ತು ಹಲವು
ಮಾರ್ಗಗಳನ್ನ ರಾಯರ ಚರಿತ್ರೆ ಉದ್ದಕ್ಕೂ
ನೋಡತೇವೆ.
ರಾಯರನ್ನ
ಪರಮ ಕೃಪಾಲು ಅನ್ನಲು ಇದಕ್ಕಿಂತ
ಉದಾಹರಣೆ ಬೇಕೇ. ಸರ್ವ ಸುಖಗಳು ನಂಗೆ
ಕೊಡಿ ಅನ್ನುವ ಭಾವನೆಇರುವ ಜನರಿಗೆ,
ಗುರುಗಳ ನಂಬಿದರೆ ಸಾಕು ಸರ್ವ
ಸುಖಗಳು ನಮವ್ವಾಗುತ್ತವೆ ಅನ್ನುವ ಸಂಸ್ಕಾರ, ಜ್ಞಾನ
, ಮಾರ್ಗ ಯಾವದು ತಿಳಿದಿಲ್ಲ, ಇ
ಕಲಿಯುಗದಲ್ಲಿ ಪಂಚೇಂದ್ರಿಗಳನ್ನು ಮತ್ತು ಕರ್ಮೇಂದ್ರಿಯಗಳನ್ನು ಕಟ್ಟಾ
ಹಾಕಿ ಏಕೋ ಚಿತ್ತದಿಂದ ಯಾವ
ಖರ್ಚ್ ಇಲ್ಲದೆ ಭಕ್ತಿ ಪೂರ್ವಕವಾಗಿ
ರಾಯರಿಗೆ ಅತಿ ಪ್ರಿಯವಾದ ಎರಡು
ಧಳ ತುಳಸಿ ಅರ್ಪಿಸಿದರೆ ಸಾಕಲ್ಲವೇ.
ತುಳಸಿಧಳ
ಅಂದ್ರೆ
ತು = ನಾನು ನನ್ನದು ಅನ್ನೋ
ಭಾವನೆ ತುಚ್ಛವಾಗಬೇಕು
ಳ = ನನ್ನಿಂದಲೇ ಎಲ್ಲ ಅನ್ನುವ ಭಾವನೆ
ಅಳಿಯಬೇಕು
ಸಿ = ನನ್ನ ಅನ್ನುವ ಪೂರ್ಣ
ಬಾವನಾಣೆ ಅಳಿಸಿ ಹೋಗಬೇಕು
ಧ = ನನ್ನದು ಅನ್ನುವದೆಲ್ಲ ನಿನ್ನ
ಕರುಣೆ ಇಂದ ಸಿಕಾದ್ದು, ನನ್ನದು
ಅನ್ನುವ ಭಾವನೆ ಧಹಿಸಬೇಕು
ಳ = ಮೇಲೆ ಹೇಳಿದ ಎಲ್ಲ
ಭಾವನೆ ಕಳಿಚಿ ಎಲ್ಲವೂ ನೀನೆ
ಎಂದು ಪದ ಪಿಡಿದರೆ ತುಳಸೀದಳ ಅರ್ಪಣೆ ಆಗುತ್ತೆ
ಸತ್ಯ ಶುದ್ಧ ಕಾಯಕ, ಸತ್ಯ
ಶುದ್ಧ ಮನಸ್ಸು, ನೀನೆ ಸತ್ಯ
ನಾನು ಮಿತ್ಯ ಅನ್ನುವ ಭಾವನೆ
ತೊಟ್ಟು ಕೂತಲ್ಲೇ ಕಣ್ಣ ಮುಚ್ಚಿದರೆ
ತತ್ಕ್ಷಣದಲ್ಲೇ ಅನುಗ್ರಹ ನೀಡುವ ಗುರುಗಳು
ನಮ್ಮ ರಾಯರು.
ಕಲಿಯುಗಳಲ್ಲಿ
ಜ್ಞಾನ ಮತ್ತು ಸನ್ಮಾರ್ಗಕ್ಕೆ ಹಚ್ಚುವ
ಗುರುಗಳಿಗಿಂತ ಅಜ್ಞಾನವನ್ನೇ ಬೋಧಿಸಿ ತಮ್ಮ ಹೊಟ್ಟೆ
ತುಂಬಿಸಿಕೊಳ್ಳುವ ಕಾಲದಲ್ಲಿ , ಮನಶುದ್ಧಿ ಇಂದ ಗುರುರಾಯ ಅಂದ್ರೆ
ಸಾಕು ಸರ್ವ ಸೇವೆಗಳನ್ನು ಅರ್ಪಿಸಿಕೊಂಡು
ಎಲ್ಲ ಜನಾಂಗವ ಉದ್ದಾರ್ ಮಾಡುತ್ತಿರುವ
ಗುರುಗಳಿಗೆ ಮನತುಂಬಿ ಶಿರಾಸಾಷ್ಟಾಂಗ ನಮಸಕರಾವ್
ಅರ್ಪಿಸುತ್ತಾ ನನ್ನ ಜೀವನದ ಎಲ್ಲ
ಗುರುಗಳಿಗೂ ನಮಸ್ಕರಿಸುತ್ತಾ ನನ್ನ ಬರವಣಿಗೆಯ ಮೊದಲ
ಪುಟ ಮುಗಿಸುತ್ತಿದ್ದೇನೆ.
ಸರ್ವೇ ಜನ ಸುಖಿನೋ ಭವಂತು:
No comments:
Post a Comment